ತೀರ್ಥಹಳ್ಳಿ: ತಾಲೂಕಿನ ತೋಟಗಾರಿಕೆ ಬೆಳೆಗಾರರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಭರ್ಜರಿ ಸಬ್ಸಿಡಿ ಸೌಲಭ್ಯ ಕಲ್ಪಿಸಲಾಗಿದ್ದು, ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆಗೆ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ‘ಪ್ರತಿ ಹನಿಗೆ ಅಧಿಕ ಬೆಳೆ’ ಕಾರ್ಯಕ್ರಮದಡಿ ಹನಿ ಮತ್ತು ತುಂತುರು ನೀರಾವರಿ ಘಟಕ ಸ್ಥಾಪಿಸಲು ಸಹಾಯಧನ ನೀಡಲಾಗುತ್ತಿದೆ. ರೈತರ 5 ಎಕರೆ ವಿಸ್ತೀರ್ಣದವರೆಗೆ ಶೇ. 90 ರಷ್ಟು ಹಾಗೂ 5 ಎಕರೆಗಿಂತ ಮೇಲ್ಪಟ್ಟ ಜಮೀನಿಗೆ (ಗರಿಷ್ಠ 12.50 ಎಕರೆಯವರೆಗೆ) ಶೇ. 45 ರಷ್ಟು ಸಹಾಯಧನ ದೊರೆಯಲಿದೆ. ಈ ಹಿಂದೆ ಯೋಜನೆಯಡಿ ಸೌಲಭ್ಯ ಪಡೆದು 7 ವರ್ಷಗಳು ಪೂರ್ಣಗೊಂಡಿರುವ ರೈತರು ಕೂಡ ಪುನಃ ಹೊಸದಾಗಿ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
ಆಸಕ್ತ ರೈತರು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ 2026ರ ನವೆಂಬರ್ 11 ರೊಳಗಾಗಿ ತೀರ್ಥಹಳ್ಳಿ ತಾಲೂಕಿನ ಕುಶಾವತಿಯಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿಗೆ ಸಲ್ಲಿಸಬೇಕಾಗಿದೆ. ಸಹಾಯಧನವನ್ನು ಸರ್ಕಾರದ ಮಾರ್ಗಸೂಚಿ ಮತ್ತು ಅನುದಾನದ ಲಭ್ಯತೆಗೆ ಅನುಗುಣವಾಗಿ ವಿತರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಮಾಹಿತಿಗೆ ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ:
- ಕಸಬಾ: ದಿನೇಶ ಟಿ.ಕೆ. (9448751947)
- ಆಗುಂಬೆ ಹಾಗೂ ಅಗ್ರಹಾರ: ಲಕ್ಷ್ಮೀಕಾಂತ್ ಕೆ.ಹೆಚ್. (9482960857)
- ಮಂಡಗದ್ದೆ: ಮಧುಕರ ಕೆ.ಎಲ್. (8296510018)
- ಮುತ್ತೂರು: ಕಾವ್ಯ ಜಿ. (8277160164)
- ತೀರ್ಥಹಳ್ಳಿ ತಾಲೂಕು ಮಟ್ಟದ ಸಂಪರ್ಕ: ಸೋಮಶೇಖರ ಕೆ. (9108280642)
ಹೆಚ್ಚಿನ ವಿವರಗಳಿಗಾಗಿ ಕುಶಾವತಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ತಮ್ಮ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





ಓದುಗರ ಅಭಿಪ್ರಾಯಗಳು