ಕ್ಷಣಾರ್ಧದಲ್ಲಿ ನುಗ್ಗಿಬಂದ ಯಮರೂಪಿ ಲಾರಿ: ನಜ್ಜುಗುಜ್ಜಾದ ಮನೆ, ಒಳಗಿದ್ದವರಿಗೆ ಆಗಿದ್ದೇನು?!

ತೀರ್ಥಹಳ್ಳಿ: ನಿಯಂತ್ರಣ ಕಳೆದುಕೊಂಡ ಭಾರಿ ಗಾತ್ರದ ಲಾರಿಯೊಂದು ರಸ್ತೆ ಪಕ್ಕದ ಮನೆಗೆ ಅಪ್ಪಳಿಸಿದ ಪರಿಣಾಮ, ಮನೆಯ ಗೋಡೆ ಧ್ವಂಸಗೊಂಡಿರುವ ಘಟನೆ ತಾಲೂಕಿನ ಕುಡುಮಲ್ಲಿಗೆ ವ್ಯಾಪ್ತಿಯ ಕುಂಬಾರಕೊಪ್ಪದಲ್ಲಿ ಸಂಭವಿಸಿದೆ.

ಅಪಘಾತದ ವೇಳೆ ಮನೆಯೊಳಗೆ ಇದ್ದವರು ಅಪಾಯದಿಂದ ಪಾರಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆಯಲ್ಲಿ ಲಾರಿಯಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *