ಶಿವಮೊಗ್ಗದ ವಿವಿಧೆಡೆ ಇಂದು ಇಡೀ ದಿನ ಕರೆಂಟ್ ಇರಲ್ಲ: ನಿಮ್ಮ ಏರಿಯಾ ಲಿಸ್ಟ್‌ನಲ್ಲಿದೆಯಾ ಚೆಕ್ ಮಾಡಿ

ಶಿವಮೊಗ್ಗ: ನಗರ ವ್ಯಾಪ್ತಿಯ ಮೆಸ್ಕಾಂ ಉಪವಿಭಾಗ-2, ಘಟಕ-6ರಲ್ಲಿ ತುರ್ತು ಕಾಮಗಾರಿ ಹಾಗೂ ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು (ಅ.31) ಬೆಳಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

  • ಗೋಪಿಶೆಟ್ಟಿಕೊಪ್ಪ ಹಾಗೂ ಹಳೆ ಊರು
  • ಸಿದ್ದೇಶ್ವರ ವೃತ್ತ
  • ಭವಾನಿ ಲೇಔಟ್
  • ಆಶ್ರಯ ಬಡಾವಣೆ
  • ಚಾಲುಕ್ಯನಗರ
  • ಕೆ.ಹೆಚ್.ಬಿ. ಕಾಲೋನಿ
  • ಗದ್ದೆಮನೆ ಲೇಔಟ್
  • ಆನಂದಗಿರಿ ಬಡಾವಣೆ
  • ಮಂಜಪ್ಪ ಬಸಪ್ಪ ಲೇಔಟ್
  • ಕಾಮತ್ ಲೇಔಟ್
  • ಮೇಲಿನ ತುಂಗಾನಗರ
  • ಜಿ.ಎಸ್. ಕ್ಯಾಸ್ಟಿಂಗ್, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಫ್ಯಾಕ್ಟರಿ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳು.

ಈ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ (MESCOM) ಇಲಾಖೆ ಕೋರಿದೆ.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *