ಆಟೋ ಚಾಲಕರ ಮನಸೋಇಚ್ಛೆ ದರಕ್ಕೆ ಬಿತ್ತು ಬ್ರೇಕ್: ಶಿವಮೊಗ್ಗ RTO ನೀಡಿದ 10 ದಿನಗಳ ಶಾಕಿಂಗ್ ಡೆಡ್‌ಲೈನ್ ಏನು?

ಶಿವಮೊಗ್ಗ: ನಗರದಲ್ಲಿ ಸಂಚರಿಸುವ ಆಟೋರಿಕ್ಷಾಗಳಲ್ಲಿ ನಿಯಮಾನುಸಾರ ಮೀಟರ್ ಬಳಸದೆ, ಪ್ರಯಾಣಿಕರಿಂದ ಮನಸೋಇಚ್ಛೆ ಹೆಚ್ಚಿನ ಬಾಡಿಗೆ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTO), ನಗರದ ಆಟೋಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.

ಪ್ರಯಾಣಿಕರ ಸುಗಮ ಸಂಚಾರ ಹಾಗೂ ಹಿತದೃಷ್ಟಿಯಿಂದ, ನಗರದ ಎಲ್ಲಾ ಆಟೋ ಮಾಲೀಕರು ಮತ್ತು ಚಾಲಕರು ಇಂದಿನಿಂದ ಮುಂದಿನ 10 ದಿನಗಳ ಒಳಗೆ ಕಡ್ಡಾಯವಾಗಿ ಆಟೋಗಳಿಗೆ ಮೀಟರ್ ಅಳವಡಿಸಬೇಕು. ಜತೆಗೆ, ಸಾರಿಗೆ ಪ್ರಾಧಿಕಾರ ನಿಗದಿಪಡಿಸಿರುವ ಅಧಿಕೃತ ದರವನ್ನಷ್ಟೇ ಸಾರ್ವಜನಿಕರಿಂದ ಪಡೆಯಬೇಕು ಎಂದು ಆರ್.ಟಿ.ಒ ಅಧಿಕಾರಿಗಳು ಸ್ಪಷ್ಟ ಆದೇಶ ನೀಡಿದ್ದಾರೆ.

ಹೆಚ್ಚುವರಿ ದರ ವಸೂಲಿ ಮಾಡಿದರೆ ಇಲ್ಲಿ ದೂರು ನೀಡಿ:

ಒಂದು ವೇಳೆ ಆಟೋ ಚಾಲಕರು ಮೀಟರ್ ಅಳವಡಿಸದಿದ್ದರೆ, ಮೀಟರ್ ಹಾಕಲು ನಿರಾಕರಿಸಿದರೆ ಅಥವಾ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟರೆ, ಸಾರ್ವಜನಿಕರು ತಕ್ಷಣವೇ ಆರ್.ಟಿ.ಒ ಸಹಾಯವಾಣಿ ಸಂಖ್ಯೆ 8277983404 ಗೆ ಕರೆ ಮಾಡಿ ಮಾಹಿತಿ ನೀಡಿ ದೂರು ದಾಖಲಿಸಬಹುದು ಎಂದು ಇಲಾಖೆ ತಿಳಿಸಿದೆ.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *