ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಸುದ್ದಿಗಳು

ಶಿವಮೊಗ್ಗ ಕೃಷಿ ಮೇಳ-2026: ಕೃಷಿ ಕ್ಷೇತ್ರದಲ್ಲಿ ಅದ್ಭುತ ಸಾಧನೆ – ಈ ಬಾರಿಯ ‘ಉತ್ತಮ ರೈತ-ರೈತ ಮಹಿಳೆ’ ಪ್ರಶಸ್ತಿ ಪಡೆದವರು ಯಾರು ಗೊತ್ತಾ?

ಕೊನೆಯ ನವೀಕರಣ:

ಶಿವಮೊಗ್ಗ: ಇಲ್ಲಿನ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಆಯೋಜಿಸಿರುವ 2026ನೇ ಸಾಲಿನ ಕೃಷಿ ಮೇಳದಲ್ಲಿ ಆರು ಜಿಲ್ಲೆಗಳ ಮಾದರಿ ಕೃಷಿಕರು ಹಾಗೂ ರೈತ ಮಹಿಳೆಯರನ್ನು ಗುರುತಿಸಿ ‘ಉತ್ತಮ ರೈತ’ ಮತ್ತು ‘ಉತ್ತಮ ರೈತ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಪುರಸ್ಕೃತರ ವಿವರ:

ಶಿವಮೊಗ್ಗ ಜಿಲ್ಲೆ: ಭದ್ರಾವತಿ ತಾಲ್ಲೂಕಿನ ಮಜ್ಜಿಗೇನಹಳ್ಳಿಯ ವಸಂತ ಬಿ.ಹೆಚ್ (99160 65956) ಹಾಗೂ ಶಿಕಾರಿಪುರದ ವೇದಾವತಿ (99021 74774).

ಚಿತ್ರದುರ್ಗ ಜಿಲ್ಲೆ: ಚಳ್ಳಕೆರೆ ತಾಲ್ಲೂಕಿನ ಗುಡಿಹಳ್ಳಿಯ ಶ್ರೀ ರಂಗಪ್ಪ (99008 66568) ಹಾಗೂ ಹೊಸದುರ್ಗದ ಆನಿವಾಳ ಗ್ರಾಮದ ರಮ್ಯ ಆರ್ (77609 02685).

ದಾವಣಗೆರೆ ಜಿಲ್ಲೆ: ಚನ್ನಗಿರಿ ತಾಲ್ಲೂಕಿನ ಹೊನ್ನಮರಡಿಯ ಶ್ರೀ ಹೆಚ್.ಕೆ. ಮಾಧವ (98808 51896) ಹಾಗೂ ಸಂತೆಬೆನ್ನೂರಿನ ಲತಾ ಎನ್.ಎಸ್ (89510 59135).

ಚಿಕ್ಕಮಗಳೂರು ಜಿಲ್ಲೆ: ಅಜ್ಜಂಪುರ ತಾಲ್ಲೂಕಿನ ತಡಗ ಗ್ರಾಮದ ಶಿವಕುಮಾ‌ರ್ ಟಿ.ಸಿ (81478 42215) ಹಾಗೂ ಎನ್.ಆ‌ರ್.ಪುರ ತಾಲ್ಲೂಕಿನ ಕರುಗುಂದದ ವಾಣಿ ಎನ್.ಕೆ (95353 22189).

ಉಡುಪಿ ಜಿಲ್ಲೆ: ಬೈಂದೂರು ತಾಲ್ಲೂಕಿನ ಅರೆಶಿರೂರಿನ ಗೌತಮ್ ಶೆಟ್ಟಿ (87626 95933) ಹಾಗೂ ಉದ್ಯಾವರದ ವತ್ಸಲ ವಿಜಯ ಕುಮಾರ್ (76187 69508).

ದಕ್ಷಿಣ ಕನ್ನಡ (ಮಂಗಳೂರು): ಮೂಡುಬಿದ್ರೆಯ ಕಲ್ಲಪುತ್ತಿಗೆ ಗ್ರಾಮದ ಗೋಪಾಲ ಸಿ ಪೂಜಾರಿ (98806 95911) ಹಾಗೂ ಬಂಟ್ವಾಳ ತಾಲ್ಲೂಕಿನ ಪುಣಚ ಗ್ರಾಮದ ಚಂದ್ರಾವತಿ (94834 07446).

ವಿಶೇಷ ತಳಿಗಳು ಹಾಗೂ ದೇಸಿ ಪದ್ಧತಿ:

ಕರಾವಳಿ-ಮಲೆನಾಡಿನ ಸಾಂಪ್ರದಾಯಿಕ ಕಬ್ಬಿನ ಗಾಣದಲ್ಲಿ ಬಳಸಲಾಗುತ್ತಿದ್ದ ಪಾರಂಪರಿಕ ‘ಕೋಣದ ಕಣೆ’ಯ ಪ್ರದರ್ಶನ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಇದರೊಂದಿಗೆ ಸಾವಯವ ಸಂಶೋಧನಾ ಕೇಂದ್ರದಿಂದ ಸಂರಕ್ಷಿಸಲಾದ 240 ಅಪರೂಪದ ದೇಸಿ ಭತ್ತದ ತಳಿಗಳ ವಿಸ್ತೃತ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ.

ಸುಧಾರಿತ ಕೃಷಿ ಹಾಗೂ ಜಲಚರ ಸಾಕಣೆ:

ಬರ ನಿರ್ವಹಣೆ, ಮಣ್ಣಿನಲ್ಲಿ ತೇವಾಂಶ ಮತ್ತು ಇಂಗಾಲ ವೃದ್ಧಿಗೆ ಬಯೋಚಾರ್ ಬಳಕೆ, ಬೀಜಾಮೃತ, ಜೀವಾಮೃತ ಹಾಗೂ ಜೈವಿಕ ಗೊಬ್ಬರಗಳ ಬಳಕೆ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಇದರೊಂದಿಗೆ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಸಹಭಾಗಿತ್ವದ ‘ಮತ್ಸ್ಯಾಂಗಣ’, ಮುತ್ತು ಕೃಷಿ, ಸಿಹಿ-ಉಪ್ಪು ನೀರಿನ ಏಡಿ ಹಾಗೂ ಮೀನು ಸಾಕಣೆ ವಿಧಾನಗಳನ್ನು ಪರಿಚಯಿಸಲಾಗಿದೆ.

ಪ್ರಾಣಿ ಸಂಪತ್ತು ಹಾಗೂ ಸ್ಪರ್ಧೆಗಳು:

ಹಸು, ಎಮ್ಮೆ, ಕುರಿ, ಮೇಕೆ ಮತ್ತು ಶ್ವಾನಗಳ ವಲಯ ಮಟ್ಟದ ಪ್ರದರ್ಶನ ಹಾಗೂ ಸ್ಪರ್ಧೆಗಳು ಜರುಗುತ್ತಿವೆ. ಜೊತೆಗೆ ಪೌಷ್ಟಿಕ ಸಿರಿಧಾನ್ಯಗಳ ಮಹತ್ವ ಸಾರುವ ‘ಸಿರಿಧಾನ್ಯ ಪಾಕ ಸ್ಪರ್ಧೆ’ ಕೂಡ ಆಯೋಜನೆಗೊಂಡಿದೆ.

ಜನಪದ ಸಂಸ್ಕೃತಿ ಮತ್ತು ಹೋರಿಗಳ ವೈಭವ:

ಮಲೆನಾಡಿನ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾದ ಹೋರಿಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದ ಹೆಸರಾಂತ ನಂದಿ, ಅಬ್ಬಲಗೆರೆಯ ಅಜ್ಜಯ್ಯ ಹಾಗೂ ಸರ್ಕಾರ್ ಹೋರಿಗಳು ಪ್ರದರ್ಶನದಲ್ಲಿ ನೋಡುಗರ ಗಮನ ಸೆಳೆಯುತ್ತಿವೆ. ವಿವಿ ವ್ಯಾಪ್ತಿಯ 6 ಜಿಲ್ಲೆಗಳ ಜಾನಪದ ಕಲಾವಿದರಿಗೆ ಸಾಂಸ್ಕೃತಿಕ ಪ್ರದರ್ಶನ ನೀಡಲು ವೇದಿಕೆ ಕಲ್ಪಿಸಲಾಗಿದೆ.

ವಿಜ್ಞಾನಿಗಳಿಂದ ನೇರ ಮಾರ್ಗದರ್ಶನ:

ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ವಿವಿಧ ಬೆಳೆಗಳ ರೋಗ-ಕೀಟ ನಿರ್ವಹಣೆ, ಆಧುನಿಕ ತೋಟಗಾರಿಕೆ ಬೆಳೆಗಳು, ಜೇನು ಕೃಷಿ ಮತ್ತು ಮಕ್ಕಳಿಗಾಗಿ ಕೃಷಿ ಪ್ರವಾಸೋದ್ಯಮದ ಕುರಿತು ತಜ್ಞರ ಸಲಹಾ ಕೇಂದ್ರದಲ್ಲಿ ನಿರಂತರ ಮಾಹಿತಿ ನೀಡಲಾಗುತ್ತಿದೆ.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *