ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ 2024-25ನೇ ಸಾಲಿನ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ (WBCIS) ಅಡಿಯಲ್ಲಿ ಅಡಿಕೆ ಬೆಳೆ ಹಾನಿಗೆ ಸಂಬಂಧಿಸಿದ ಪರಿಹಾರದ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.
ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ (ವಿಮಾ ಘಟಕ) ವ್ಯಾಪ್ತಿಯಲ್ಲಿ ಹಾನಿಯ ತೀವ್ರತೆಗೆ ತಕ್ಕಂತೆ ಪ್ರತಿ ಹೆಕ್ಟೇರ್‌ಗೆ ನಿಗದಿಯಾದ ವಿಮಾ ಮೊತ್ತದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.
ಗ್ರಾ.ಪಂ.ವಾರು ಪ್ರತಿ ಹೆಕ್ಟೇರ್‌ಗೆ ನಿಗದಿಯಾದ ಪರಿಹಾರ (ರೂ.ಗಳಲ್ಲಿ):
- ಸುಳುಗೋಡು: ₹74,000
- ಯಡೂರು: ₹74,000
- ಅಂಡಗದೂದೂರು: ₹67,750
- ಖೈರಗುಂದ: ₹67,750
- ಕರಿಮನೆ: ₹67,750
- ಅಮೃತ: ₹55,216
- ಹೆದ್ದಾರಿಪುರ: ₹53,666
- ಹುಂಚ: ₹48,550
- ಸೊನಲೆ: ₹24,138
- ಎಂ.ಗುಡ್ಡೆಕೊಪ್ಪ: ₹15,850
- ಮುಂಬಾರು: ₹15,850
- ಮಾರುತಿಪುರ: ₹14,483
- ಅರಸಾಳು: ₹13,533
- ಬಾಳೂರು: ₹13,533
- ಬೆಳ್ಳೂರು: ₹13,533
- ಕೆಂಚನಾಲ: ₹13,533
- ರಿಪ್ಪನ್‌ಪೇಟೆ: ₹13,533
- ಚಿಕ್ಕಜೇನಿ: ₹9,533
- ಹರತಾಳು: ₹9,533
- ಹರಿದ್ರಾವತಿ: ₹9,533
- ಪುರಪ್ಪೆಮನೆ: ₹8,450
- ಕೋಡೂರು: ₹3,683
- ಮೂಡುಗೊಪ್ಪ-ನಗರ: ₹3,450
- ಮೇಲಿನಬೆಸಿಗೆ: ₹2,400
- ರಾಮಚಂದ್ರಪುರ: ₹2,400
- ತ್ರಿಣಿವೆ: ₹2,400
- ಅರಮನೆಕೊಪ್ಪ: ₹2,200
- ಹೊಸೂರು (ಸಂಪೇಕಟ್ಟೆ): ₹2,200
- ನಿಟ್ಟೂರು: ₹1,550
- ಜೇನಿ: ₹1,150
ಎಲ್ಲಾ ಪಂಚಾಯಿತಿಗಳ ಒಟ್ಟು ಪರಿಹಾರದ ಪ್ರಮಾಣ ₹7,05,150 ಆಗಿದ್ದು, ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನಿಯಮಾನುಸಾರ ವಿಮಾ ಹಣ ಜಮೆಯಾಗಲಿದೆ. ರೈತರು ತಮ್ಮ ಸ್ಥಳೀಯ ಕೃಷಿ ಇಲಾಖೆ ಅಥವಾ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ಇನ್ನೂ, ಅತಿವೃಷ್ಟಿಯಿಂದ ಕಂಗೆಟ್ಟ ತಾಲ್ಲೂಕಿನ ಹಲವು ಕಡೆ ಅಡಿಕೆ ಬೆಳೆಗಾರರಿಗೆ ಬೆಳೆ ವಿಮಾ ಪರಿಹಾರದಲ್ಲಿ ತಾರತಮ್ಯ ಎಸಗಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದ್ದು ಇದರ ವಿರುದ್ಧ ರೈತರಿಂದ ಹಲವೆಡೆ ಪ್ರತಿಭಟನೆ ಸಹ ನಡೆಯುತ್ತಿದೆ.






ಓದುಗರ ಅಭಿಪ್ರಾಯಗಳು