ಪ್ರಧಾನಿ ‘ಎಕ್ಸ್’ ಖಾತೆಯಲ್ಲಿ ಕೋಣಂದೂರು ಕಾಲೇಜು ವಿದ್ಯಾರ್ಥಿಗಳ ಕಲರವ: ಮಲೆನಾಡಿನ ಪ್ರತಿಭೆಗೆ ರಾಷ್ಟ್ರಮಟ್ಟದ ಗೌರವ

ಶಿವಮೊಗ್ಗ: ಗುಜರಾತ್‌ನಲ್ಲಿ ನವೆಂಬರ್ 1ರಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ಏಕತಾ ದಿನದ ಸಂಭ್ರಮಾಚರಣೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಯಕ್ಷಗಾನವು ಎಲ್ಲರ ಗಮನಸೆಳೆದಿದೆ. ಒಟ್ಟು 16 ವಿದ್ಯಾರ್ಥಿಗಳ ತಂಡವು ಈ ರಾಷ್ಟ್ರಮಟ್ಟದ ಸಮಾರಂಭದಲ್ಲಿ ಕರಾವಳಿ-ಮಲೆನಾಡಿನ ಗಂಡುಕಲೆಯನ್ನು ಅದ್ಭುತವಾಗಿ ಪ್ರಸ್ತುತಪಡಿಸಿತು.

ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎದುರೇ ನಡೆದ ಈ ಕಲಾಪ್ರದರ್ಶನಕ್ಕೆ ಪ್ರಧಾನಿಯವರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಪ್ರಧಾನಿಯವರು ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಈ ಯಕ್ಷಗಾನ ಪ್ರದರ್ಶನದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಹಂಚಿಕೊಂಡಿರುವ ಆ ಫೋಟೋದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ಅಮೂಲ್ಯ, ವೈಶಾಲಿ ಹಾಗೂ ನಿಶ್ಚಿತಾ ಅವರು ಯಕ್ಷಗಾನ ವೇಷಭೂಷಣದಲ್ಲಿ ಕಂಗೊಳಿಸುತ್ತಿದ್ದಾರೆ.

ದೇಶದ ಅತ್ಯುನ್ನತ ವೇದಿಕೆಯಲ್ಲಿ ಮಲೆನಾಡಿನ ಜನಪದ ಕಲಾ ಪ್ರಕಾರವನ್ನು ಪ್ರದರ್ಶಿಸಿ, ಪ್ರಧಾನಿಯವರಿಂದ ಪ್ರಶಂಸೆ ಪಡೆದಿರುವುದು ಸಂಸ್ಥೆಗೆ ಸಂದ ದೊಡ್ಡ ಗೌರವವಾಗಿದೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ, ಸಾಮಾಜಿಕ ಜಾಲತಾಣದ ಮೂಲಕ ಉತ್ತೇಜನ ನೀಡಿದ ಪ್ರಧಾನಮಂತ್ರಿಯವರಿಗೆ ಎನ್‌ಇಎಸ್ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಂಶುಪಾಲರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *